ಅರಿವಿಗೂ ಅರಿಯದ ಅಮಲಲಿ ತೇಲುತಿದೆ ಏನೊ? ಮನಸು ಅಸಲಿಯೋ ನಕಲಿಯೋ ಅರಿಯೆನು ನಾ ಕಗ್ಗಂಟ ಬಿಡಿಸಿ ತಿಳಿಸು ಯಾವುದು ಕನಸು?, ಯಾವುದು ನನಸು ಒಮ್ಮೆ ಸ್ಪಷ್ಟ ಪಡಿಸು ನಾ ಅಲ್ಲಿ-ಇಲ್ಲಿ ಓಡುವ ಕೂಸು, ನೀ ತಳಿಸಿ-ತಣಿಸು||ಪ|| ಕ್ಷಮಿಸದಿರು ನನ್ನನು, ಮತ್ತೆ ಮಾಡುವ ಅದೇ ತಪ್ಪಿಗೆ ಚೇಳಿಸು ನೀ ಹಾಗೆಯೆ, ಕೊಡದೆ ನಾ ಬೇಡುವ ಒಪ್ಪಿಗೆ ಸುಮ್ಮನಿರಲು ಹೇಳು ನನ್ನ ನೋಡಿ ಮಿಟುಕುವ ಕಣ್ಣ ರೆಪ್ಪೆಗೆ ನೂಕಿದೆ ಏನು?, ಬಿಳಲು ನಾನು, ಪ್ರೀತಿಯ ಸುಂದರ ಬಲೆಗೆ ಬರುವುದಾದರು ಹೇಗೆ ಹೊರಗೆ?, ಇದ್ದು ಬಿಡುವೆ ಕಾಣದ ಹಾಗೆ||೧|| ತುಂಟ ಪೋಕರಿ ಒಳಗೆ, ಗೆಳತಿ ಬರುವ ಗಳಿಗೆ ಸಹಿಸಲಾಗದು ತರಲೆ, ಹೆಚ್ಚು ಕೊಡದಿರು ಸಲಿಗೆ ಮಾತು-ಮಾತಿಗಿಲ್ಲ ತೆರಿಗೆ, ಅವಳು ತಿರುಗಿ ನೋಡುವ ಪರಿಗೆ ಕೊಂದೆಯ ಏನು?, ಸಾಯಲು ನಾನು! ಓರೆ ನೋಟದ ಚೂಪು ಗುಂಡಿಗೆ ಬದುಕಲಾದರು ಸಾದ್ಯವು ಹೇಗೆ, ಇದ್ದು ಬಿಡುವೆ ಇರುವಾ ಹಾಗೆ||೨|| -- ಚಂದನ್ ಶರ್ಮ