ನಾದವಿರದ ಬದುಕೇ
ಸಾಹಿತ್ಯ: ಕೆ.ಎಸ್. ನಿಸಾರ್ ಅಹಮದ್
ಧ್ವನಿ: ಎಚ್ ಕೆ ನಾರಾಯಣ
ನಾದವಿರದ ಬದುಕೇ
ಉನ್ಮಾದ ಕೋರಬೇಡ
ಈ ನೆಲದ ಜಲವ ಸವಿದು
ರವಿ ಕರುಣೆ ಬರೆಯಬೇಡ
ಬಿಡುವಿರದ ದುಡಿತದಲ್ಲಿ
ಬಲಿಯಾಗದಿರಲಿ ಬೆರಗು
ಸುಡು ಬಾಳಿನಂಚಿನಲ್ಲಿ
ಮೆರೆದಿರಲಿ ಕಲೆಯ ಸೆರಗು
ಕಳೆ ಎಷ್ಟೆ ಇದ್ದರೇನು?
ಕನಸಿರದ ಬಾಳು ಬಾಳೆ?
ಮಳೆ ಬಿಲ್ಲು ಸಿಂಗರಿಸದ
ಕರಿಮುಗಿಲಿನೊಂದು ಮಾಲೆ!
ಉದಯಾಸ್ತಗಳಲಿ ಲೋಕ
ತಾನಲ್ಲ ಬರಿಯ ಮಣ್ಣು
ಚೆಲುವೆದುರಿನಲ್ಲಿ ಸತತ
ಹೊಸತಾಗಬೇಕು ಕಣ್ಣು
ಚಣಚಣವು ಜೀವ ಮಾಗಿ
ಮರುಹುಟ್ಟು ಪಡೆಯುತಿರಲಿ
ಹೊಸ ನಲವ ನೆಲೆಗೆ
ತಾನು ನಿಲದಂತೆ ನಡೆಯುತಿರಲಿ
🍀💐🍀💐🍀💐🍀💐🍀
ಅನುಸಂಧಾನ: ಕೃಷ್ಣ ಭಟ್ ಅಳದಂಗಡಿ
Comments
Post a Comment