🌸🌾🌸 *ಈ ಭಾವಗೀತೆ* 🌸🌾🌸
ಸಾಹಿತ್ಯ: ಪು.ತಿ. ನರಸಿಂಹಾಚಾರ್
ಧ್ವನಿ: ವೃಂದಗಾನ
*ಓಡುವ ಬದುಕಿನ ಧಾವಂತವನ್ನು
ಕವಿ ಬಲು ಸುಂದರವಾಗಿ
ಕಟ್ಟಿಕೊಟ್ಟಿರುವ ಕವಿತೆ ಇದು*
ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ
ಈ ಜಗವೋಡುತಿದೆ
ಹಳತ ನೋಡಿ ತಾ ಕಿಲಕಿಲ ನಗುತಲಿ
ಓ ಜಗವೋಡುತಿದೆ
ಯುಗ ಯುಗ ದಿನದಿನ ಮನುಮನ್ವಂತರ
ಮಾಡಿದುದನೆ ತಾ ಮಾಡುತ್ತಾ
ಒಂದೇ ಹಾಡು ಓ ಒಂದೇ ಸೋಬಾನೆ
ಹಾಡಿದುದನೆ ತಾ ಹಾಡುತ್ತಾ
ಕಣ್ಣ ಕಪಾಟಿನ ರಥಾಶ್ವದಂದದಿ
ಒಂದೇ ಹಾದಿಯ ಹಂಬಲವಾಗಿ
ನಡೆದೀ ಲೋಕವು ಆವ ಶಕ್ತಿಗೊ
ಇಂದು ತಾನು ಬಲು ಬಲು ಮರುಳಾಗಿ
ಅಜ್ಞಾನಕೆ ವಿಜ್ಞಾನದ ಹೊಸ ಬೆಳಕು
ಮಿಂದ ಮನಕೆ ಹೊಸ ಮತಗಳ ಚುರುಕು
ಊಹೆಯನೇ ಮುಚ್ಚುವ ಹೊಸ ಸೃಷ್ಟಿ
ಹೊಸ ಬಾಳಿಗೆ ಹೊಂಚುವ ಹೊಸ ದೃಷ್ಟಿ
ಕವಿಗಾಯಿತು ನವ ಹರ್ಷ ಕ್ರಾಂತಿ
ಕಲೆಗಾಯಿತು ಹೊಸ ಚೆಲುವಿನ ಕಾಂತಿ
ಚಿತ್ರಕೆ ಹೊಸ ರಂಗು ಹಾಡಿಗು ಹೊಸ ರಂಗು
🍀🌼🍀🌼🍀🌼🍀🌼🍀
ಅನುಸಂಧಾನ: ಕೃಷ್ಣ ಭಟ್ ಅಳದಂಗಡಿ
Comments
Post a Comment