ಭಗ್ನ ಪ್ರೇಮಿಯ ಕನಸು

ಭಗ್ನ ಪ್ರೇಮಿಯ ಕನಸು
ಮುಸ್ಸ೦ಜೆ ಬೆಳಕಿನಲಿ 
ನಾ ಕ೦ಡ ಕನಸಿನಲಿ
ಒಲಿದೊಲಿದು ಬ೦ದವಳು ನೀನೆ ದಿವ್ಯ
ಬಾರದಿದ್ದರೂ ನಿನ್ನ ನೆನಪಿನಲೆ ನನ್ನ ಜೀವನವಿಹುದು ಭವ್ಯ
ನಿನ್ನ ಜೊತೆಯಲ್ಲೆ ಸುತ್ತಿದೆ ನೀಲಾ೦ತರಿಕ್ಷ, ತಾರೆಗಳ ಲೋಕ
ನೀ ಜೊತೆಯಲ್ಲಿರುವವರೆಗೂ ನಾ ಕ೦ಡಿದ್ದೆಲ್ಲ ನಾಕ
ಕಡಲ ತಡಿಯ ವಾಸ ಭೊಗ೯ರೆವ ಜಲಪಾತ ನಿನ್ನ ಜೊತೆಯಲ್ಲೆ
ನಾ ಕ೦ಡದ್ದು ಕನಸೇ, ಆಗಿತ್ತದೇ ನನ್ನ ಬಾಳಿನಾಸೆ
.                       .................ಅನ೦ತ್ ಕಳಸಾಪುರ

Comments