ವ್ಯರ್ಥ್ಯವಲ್ಲವೆ....
ವ್ಯರ್ಥ್ಯವಲ್ಲವೆ ಜನ್ಮ ವ್ಯರ್ಥ್ಯವಲ್ಲವೆ||2||
ಅರ್ತಿಯಿಂದ ಹರಿಯ ನಾಮ ನಿತ್ಯ ಸ್ಮರಿಸದವನ ಜನ್ಮ||2||
||ವ್ಯರ್ಥ್ಯವಲ್ಲವೆ||
ಹರಿಯ ಸೇವೆ ಮಾಡದವನ, ಹರಿಯ ಗುಣಗಳೆಣಿಸದವನ||2||
ಹರಿಯ ಕೊಂಡಾಡದವನ, ಹರಿಯ ತಿಳಿಯದವನ ಜನ್ಮ
||ವ್ಯರ್ಥ್ಯವಲ್ಲವೆ||
ದಾಸರೊಡನೆ ಆಡದವನ, ದಾಸರೊಡನೆ ಪಾಡದವನ||2||
ದಾಸರ ಕೊಂಡಾಡದೆ , ಹರಿದಾಸನಾಗದವನ ಜನ್ಮ
||ವ್ಯರ್ಥ್ಯವಲ್ಲವೆ||
ಒಂದು ಶಂಖ ಉದಕ ತಂದು ,ಚಂದದಿಂದ ಹರಿಗರ್ಪಿಸಿ||2||
ತಂದೆ ಪುರಂದರವಿಠ್ಠಲನ ಹೊಂದಿ ನೆನೆಯದವನ ಜನ್ಮ
||ವ್ಯರ್ಥ್ಯವಲ್ಲವೆ||
Comments
Post a Comment