ಹೇಳಿ ಹೋಗು ಕಾರಣ. . . .

ಮನಸಿಲ್ಲದ ಮನಸು
ಮಿಡಿತವಿಲ್ಲದ ಹೃದಯ
ನೆನಪಿಲ್ಲದ ಬದುಕು
ಸಂಗಾತಿಯಿಲ್ಲದ ಜೀವನ
ನನ್ನದಾಗಿತ್ತು ಗೆಳತಿ. . . . 

ಒಮ್ಮೆ ನೀ ಕೊಟ್ಟ ನಗು
ನೀ ಸೆಳೆದ ಕಣ್ಣ ಬಿಂಬ
ಸವರಿದ ತಂಗಾಳಿ
ಬಳುಕುವಾ ನಡೆ
ಎಲ್ಲವನೂ ಎಚ್ಚರಿಸಿತ್ತು ಗೆಳತಿ. . .

ಅದೇನೋ ತವಕ ಪುಳಕ
ನಿನ್ನ ನೋಡುವ ಕಣ್ಣ ಕಾಟ
ಢವ ಢವ ಎದೆಯ ಬದಿತ
ಪಿಸುಗುಡುವ ಮನಸ ಮಾತು
ಕಾಡುತ್ತಲೇ ಇದೆ ನನ್ನ ಗೆಳತಿ. . 

ಎದೆಯ ಹೊಲ ಉತ್ತು ಪ್ರೀತಿಯ ಬಿತ್ತು
ನಿನಗೇನು ಬಂತು ಕುತ್ತು
ಕಾಣದೇ ನಗೆಯ ಬೀರದೇ. . 
ಪರಿಮಳ ಸೂಸದೇ ತಂಗಾಳಿ ಬೀಸದೇ. . 
ಹೊರಟೆ ಎಲ್ಲಿಗೆ ಗೆಳತಿ

ಹೇಳಿ ಹೋಗು ಕಾರಣ. . . . 

Comments

Popular posts from this blog

ನಾದವಿರದ ಬದುಕೇ

*ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ*

🌸🌾🌸 *ಈ ಭಾವಗೀತೆ* 🌸🌾🌸