*ಒಂದು ಮಣ್ಣಿನ ಜೀವ*
ಸಾಹಿತ್ಯ: ಎಚ್ಚೆಸ್ ವೆಂಕಟೇಶಮೂರ್ತಿ
ಗಾಯನ: ಸಿ. ಅಶ್ವಥ್
ಒಂದು ಮಣ್ಣಿನ ಜೀವ
ಎಂದೂ ಮಣ್ಣಿನಲ್ಲೇ ಉಳಿಯದು
ಸಣ್ಣ ಸಸಿಯೇ ಬೆಳೆದು ಬೇರಿಗೆ
ಪಾರಿಜಾತವ ಸುರಿವುದು
ನೀರು ತುಂಬಿದ ಮಣ್ಣ ಪಾತಿಯೆ
ಕಂದರಿಗೆ ಕದಲಾರತಿ
ನೂರು ಕುಡಿಗಳ ದೀಪವೃಕ್ಷವೇ
ಅಮ್ಮನೆತ್ತುವ ಆರತಿ
ಹಕ್ಕಿಪಕ್ಕಿಯ ಬಣ್ಣದಕ್ಷತೆ
ಅರಕೆ ಬಾಗಿದ ಮುಡಿಯಲಿ
ಹಸಿರಿನೆಲೆಗಳ ಉಸಿರಿನಾಶೀರ್ವಚನ
ಅರಗಿಣಿ ನುಡಿಯಲಿ
ಯಾವುದೋ ಸೋಬಾನೆ ಬಾನೆ
ತುಂಬಿ ತುಳುಕಿದ ಝೇಂಕೃತಿ
ತುಟಿಯ ಬಟ್ಟಲು ಸುರಿವ ಅಮೃತಕೆ
ಎಲ್ಲಿ ಇದೆಯೋ ಇತಿಮಿತಿ
ಅಂದು ಒಂದೇ ಬಿಂದು
ಇಂದೋ ಎಂದೂ ಬತ್ತದ ನಿಚ್ಚರಿ
ಮಣ್ಣ ಮಕ್ಕಳ ಕಣ್ಣನೊರೆಸುವ
ಹಸಿರ ಸೆರಗೋ ಥರಾವರಿ
ಹರಕೆಯಿದ್ದರೆ ಯಾವ ಅರಕೆ
ನಮ್ಮ ಅಮ್ಮನ ಮಡಿಲಲಿ
ಹಾಳುಗೆನ್ನೆಯನಾಲಿ ನನ್ನವು
ಅನ್ನಪೂರ್ಣೆಯ ಗುಡಿಯಲಿ
ಹೂವು ಸಾವಿರ ಸೇರಿ
ಒಂದೇ ಹಾರವಾಗುವ ಪಕ್ಷಕೆ
ಲಕ್ಷ ಮಕ್ಕಳೇ ಅಕ್ಷಮಾಲೆ
ನಮ್ಮ ತಾಯಿಯ ವಕ್ಷಕೆ
🌸🍀🌸🍀🌸🍀🌸🍀🌸
ಅನುಸಂಧಾನ: ಕೃಷ್ಣ ಭಟ್ ಅಳದಂಗಡಿ
Comments
Post a Comment