*ಯಾರು ಹೂಡಿದ ಆಟವೊ*
ಸಾಹಿತ್ಯ: ಎನ್ನೆಸ್ ಲಕ್ಷ್ಮೀನಾರಾಯಣ ಭಟ್ಟರು
ಧ್ವನಿ: ರತ್ನಮಾಲಾ ಪ್ರಕಾಶ್,
ಪುತ್ತೂರು ನರಸಿಂಹ ನಾಯಕ್
ಯಾರು ಹೂಡಿದ ಆಟವೋ?
ಯಾರು ಮಾಡಿದ ಮಾಟವೋ?
ಮಾಯೆಯೆಂಬ ಜಾಲ ಹೂಡಿ
ತೆರೆದ ಭಾಗ್ಯದ ನೋಟವೋ?
ಮೇಘದ ಹೂಮಾಲೆ ಮೇಲೆ
ಗಾಳಿಯ ಬೆರಳಾಡಿ ತೇಲೆ
ಗಾಲು ಬೆಳಕಿನ ಹೊಳೆಯ ತಳದಿ
ಚಂದ್ರಬಿಂಬವೆ ಹೊಂಚಿದೆ-ಮರಿ
ಚಿಕ್ಕೆಗಳ ಸಿರಿ ಮಿಂಚಿದೆ
ಸಾಲು ಅಲೆಯ ನೀಲ ಕಡಲು
ಕಾಳು ತೂಗುವ ಪೈರ ಮಡಿಲು,
ಕೊಂಬೆ ಕೊಂಬೆಯ ಮೇಲೆ ಕೂತು
ಹಕ್ಕಿ ಸಾಲು ಹಾಡಿದೆ-ಖುಷಿ
ಉಕ್ಕಿ ಬುವಿಯೇ ನೋಡಿದೆ!
🌼🌿🌼🌿🌼🌿🌼🌼🌿🌼
ಅನುಸಂಧಾನ: ಕೃಷ್ಣ ಭಟ್ ಅಳದಂಗಡಿ
Comments
Post a Comment